ಇತ್ತೀಚಿನ ಸುದ್ದಿ

ಕಾಲೇಜು ಶಿಕ್ಷಣದಲ್ಲಿ ರಂಗ ತರಬೇತಿ ಹಾಗೂ ಕಂಪ್ಯೂಟರ್ ಶಿಕ್ಷಣದ ಮಹತ್ವ

NP 2 7 22 1    NP 2 7 22 2 
NP 7 22 5    NP 2 7 22 3 

ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ರಂಗ ತರಬೇತಿ ಕಾರ್ಯಗಾರವನ್ನು ಮತ್ತು ದಿ ರೋಲ್ ಆಫ್ ಕಂಪ್ಯೂಟರ್ ಎಜುಕೇಶನ್ ಎಂಬ ವಿಷಯವನ್ನು ಕುರಿತು ನೈಪುಣ್ಯ ಟ್ರಸ್ಟ್ (ರಿ) ಬಸವನಾಳು ಹಾಗೂ ಶ್ರೀ ವಿಜೇತಾ ಕಂಪ್ಯೂಟರ್ ಎಜುಕೇಶನ್ ಸೆಂಟರ್ ನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ Dr. ಎಸ್.ಎಮ್.  ಸಿದ್ಧಲಿಂಗಮೂರ್ತಿ ಯವರು ವಹಿಸಿ ಅಧ್ಯಕ್ಷೀಯ ನುಡಿಯಲ್ಲಿ ರಂಗ ತರಬೇತಿಯು ಇಂದಿನ ಯುವಕರಲ್ಲಿ ಬದುಕುವ ಸ್ಥೈರ್ಯ  ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತದೆ ಮತ್ತು ಕಂಪ್ಯೂಟರ್ ಶಿಕ್ಷಣವು ಇಂದಿನ ಯುವಕರ ಜೀವನೋಪಾಯಕ್ಕೆ ಅಗತ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಆನಂದ ಕರುವಿನ ರಂಗ ಕಲಾವಿದರು ಹಾಗೂ ವಾಣಿಜ್ಯ ಉಪನ್ಯಾಸಕರು ಇವರು ರಂಗಭೂಮಿ ಮತ್ತು ರಂಗ ತರಬೇತಿಯ ಮಹತ್ವದ  ಕುರಿತು ಆಧುನಿಕ ದಿನಮಾನದಲ್ಲಿ ರಂಗ ಶಿಕ್ಷಣದ ಮಹತ್ವವನ್ನು ಪರಿಚಯಿಸಿದರು ಹಾಗೂ ಶ್ರೀಯುತ ಅರುಣ್ ನಾಯಕ್ ಬಿ.ಎಸ್. ವಾಣಿಜ್ಯ ಉಪನ್ಯಾಸಕರು ಹಾಗೂ ಕಂಪ್ಯೂಟರ್ ತರಬೇತಿದಾರರು ಇವರು ಆಧುನಿಕ ಜಗತ್ತಿನ ಉದ್ಯೋಗದಲ್ಲಿ ಕಂಪ್ಯೂಟರ್ ಶಿಕ್ಷಣದ ಪಾತ್ರದ ಬಗ್ಗೆ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಯುತ ವೆಂಕಟೇಶ್ ಎಚ್ ಎಸ್ ಮುಖ್ಯಸ್ಥರು ವಾಣಿಜ್ಯ ವಿಭಾಗ, ಜಿ.ಉಮೇಶ್ ಮುಖ್ಯಸ್ಥರು ರಸಾಯನಶಾಸ್ತ್ರ ವಿಭಾಗ, ಡಿ.ತಿಪ್ಪೇಸ್ವಾಮಿ ಮುಖ್ಯಸ್ಥರು ಕನ್ನಡ ವಿಭಾಗ, ಶಫಿಉಲ್ಲಾ ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ, ಮಲ್ಲಿಕಾರ್ಜುನ್, ಶ್ರೀಮತಿ ಸ್ವರ್ಣ ಇನ್ನಿತರು ಉಪಸ್ಥಿತರಿದ್ದರು.

294341

Your IP: 3.224.147.211
2024-03-29 15:10

ಸಂಪರ್ಕ ವಿಳಾಸ

ಎಡಿಬಿ ಪ್ರಥಮ ದರ್ಜೆ ಕಾಲೇಜು

ಹರಪನಹಳ್ಳಿ
ವಿಜಯನಗರ ಜಿಲ್ಲೆ

583131

   
08398295005
   
08398295005
   
This email address is being protected from spambots. You need JavaScript enabled to view it.

 

Log in

Login to your account

Username *
Password *
Remember Me
Designed By Adya Technologies Adya-Technologies