
ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ
ಹರಿಹರ ರೋಡ್, ಹರಪನಹಳ್ಳಿ -583131, ಕರ್ನಾಟಕ, ಭಾರತ.
(ದಾವಣಗೆರೆ ವಿಶ್ವವಿದ್ಯಾಲಯದೊಂದಿಗೆ ಸಂಲಗ್ನತೆ, ದಾವಣಗೆರೆ
ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜನ್ನು 1972ರಲ್ಲಿ ಸ್ಥಾಪಿಸಲಾಯಿತು. ಬಳ್ಲಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಆದ್ಯಪ್ರವರ್ತಕ ಶಿಕ್ಷಣ ಸಂಸ್ಥೆಯಾಗಿತ್ತು. 1916ರಲ್ಲಿ ಪ್ರಾರಂಭವಾದ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ, ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜು ಮೂರನೇ ಸ್ಥಾನದಲ್ಲಿದೆ. ಶ್ರೀ ರಾಜ ಸೋಮಶೇಖರ ನಾಯಕ ಆಳಿದ ಕೋಟೆಯ ಸ್ಥಳದಲ್ಲಿ ಈ ಕಾಲೇಜು ನಿರ್ಮಾಣವಾಗಿದೆ. ದಿವಾಂಗತ ಶ್ರೀ ಅಂಬ್ಲಿ ಮಲ್ಲಪ್ಪ, ಇವರು ಕಾಲೇಜಿಗೆ ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿದರು ಮತ್ತು ಶ್ರೀ ಶೇಷಾಜಿ ಹಸ್ತಿಮಲ್ ಜೈನ್, ಇವರು 6.93 ಎಕರೆಗಳಷ್ಟು ಭೂಮಿಯನ್ನು ದಾನವಾಗಿ ನೀಡಿದ್ದರಿಂದ ನಮ್ಮ ಕಾಲೇಜು ಅತ್ಯುತ್ತಮ ಸ್ಥಳದಲ್ಲಿ ಪ್ರಾರಂಭವಾಗಿದೆ.
ವೀ.ವಿ.ಸಂಘದ ಅಂದಿನ ಪದಾಧಿಕಾರಿಗಳಾದ ಶ್ರೀ ಅಲ್ಲಂ ಕರಿಬಸಪ್ಪ, ಶ್ರೀ ಎನ್.ತಿಪ್ಪಣ್ಣ, ಶ್ರೀ ಮರಿಯಪ್ಪ ಮತ್ತು ಶ್ರೀ ಎ.ಎಂ.ಗಂಗಾಧರಯ್ಯ ಹಾಗೂ ಸ್ಥಳಿಯರಾದ ಶ್ರೀ ಕೆ.ದಿವಾಕರ, ಶ್ರೀ ಕಟ್ಟಿ ಸೇತೋರಾಮಚಾರ್, ಶ್ರೀ ಅರುಂಡಿ ನಿಂಗಪ್ಪ, ಎಸ್.ಕೊಟ್ರಪ್ಪ, ಶ್ರೀ ಬಿದ್ರಿ ವಿರೂಪಾಕ್ಷಪ್ಪ, ಶ್ರೀ ಅಂಬ್ಲಿ ಶಿವಶಂಕರಪ್ಪ, ಶ್ರೀ ಕೊಟ್ರೇಶಪ್ಪ, ಶ್ರೀ ಮಲ್ಕಪ್ಪ ಮತ್ತು ಇನ್ನಿತರ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಸಲುವಾಗಿ ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಅವರ ನಿಸ್ವಾರ್ಥ ತ್ಯಾಗ, ಮಾನವೀಯತೆಯ ಸೇವೆಯಿಂದ ಹರಪನಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಅಗತ್ಯಗಳನ್ನು ಪೂರೈಸುವ ಕಾರಣದಿಂದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ನಿಜಲಿಂಗಪ್ಪ, ರವರ ಉದ್ಘಾಟನೆಯಿಂದ ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜು 1972ರಲ್ಲಿ ಅಸ್ಥಿತ್ವಕ್ಕೆ ಬಂದಿದೆ.