ಇತ್ತೀಚಿನ ಸುದ್ದಿ

ವಿ.ವಿ. ಸಂಘ, ಬಳ್ಳಾರಿ.
ಎ.ಡಿ.ಬಿ.ಪ್ರಥಮ ದರ್ಜೆ ಮಹಾವಿದ್ಯಾಲಯ, ಹರಪನಹಳ್ಳಿ
ವಿಜಯನಗರ ಜಿಲ್ಲೆ
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ- 23-01-2023
ಮಾನವೀಯ ಮೌಲ್ಯ ಕುರಿತು ಉಪನ್ಯಾಸ

Human Values 23 1 2023 3    Human Values 23 1 2023 4 

ದಿ: 23-01-2023 ರಂದು ಎ.ಡಿ.ಬಿ.ಪ್ರ.ದರ್ಜೆ ಮಹಾವಿದ್ಯಾಲಯದಲ್ಲಿ ರಾ.ಸೇ.ಯೋ.ವತಿಯಿಂದ  ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾಚಾರ್ಯರ ಅಧ್ಯಕ್ಷತೆಯಲ್ಲಿ ಪಿ.ಬ್ರರಾಂಭ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹರಿಹರದ ರಾಮಕೃಷ್ಣ ಆಶ್ರಮದ ಪರಮ ಪೂಜ್ಯ ಶಾರದೇಶಾಂಬ ಅವರಿಂದ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು.ತಮ್ಮ ಉಪನ್ಯಾಸದಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದರು.

ಶಿಕ್ಷಣವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು,ಕಲಿಕೆಯ ಕೌಶಲ್ಯಗಳು ಮತ್ತು ಒಬ್ಬರ ಉದ್ದೇಶವನ್ನು ಪೂರೈಸಲು ಕಾರಣವಾಗುವ ತಿಳಿವಳಿಕೆ ಮತ್ತು ಕೌಶಲ್ಯಗಳನ್ನು ಅಭ್ಯಾಸ ಮಾಡುವುದು. ಇದು ಕಲಿಕೆಯ ಕೌಶಲ್ಯಗಳ ಬಗ್ಗೆ ಮಾತ್ರವಲ್ಲ ‘ಏನು ಮಾಡಬೇಕು ಮತ್ತು ಏನು ಮಾಡಬಾರದು ವ್ಯವಹರಿಸುವ ವಿಷಯನ್ನು ಮೌಲ್ಯ ಶಿಕ್ಷಣ ಎಂದು ಕರೆಯಲಾಗುತ್ತದೆ. ಇದು ಸರಿಯಾದ ತಿಳುವಳಿಕೆಯನ್ನು ಅಭಿವೃದ್ದಿ ಪಡಿಸಲು ಸಹಾಯ ಮಾಡುತ್ತದೆ. ಈ ಕೆಳಗಿನ ವಿಧಾನಗಳಲ್ಲಿ ಜೀವನ ಕೌಶಲ್ಯ ಮತ್ತು ಮೌಲ್ಯಗಳ ಅಭಿವೃದ್ದಿಯಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ.

  • ಕೌಶಲ್ಯವನ್ನು ಬೆಳಿಸಿಕೊಳ್ಳಿಲು ಇತರರನ್ನು ಶ್ಲಾಘಿಸಿ.
  • ಸ್ವಯಂ ಅರಿವನ್ನು ಬೆಳೆಸಿಕೊಳಳ್ಳಿ.
  • ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವ ಕೌಶಲ್ಯವನ್ನು ಪಡೆದುಕೊಳ್ಳಿ
  • ಜವಾಬ್ದಾರಿಗಳನ್ನು ತೆಗೆದು ಕೊಳ್ಳುವ ಮೂಲಕ ಇತರರನ್ನು ದೂಷಿಸುವುದನ್ನು ತಪ್ಪಸಿ.

ಪ್ರತಿ ಒಬ್ಬ ವಿದ್ಯಾರ್ಥಿಯ “ I can do any thing and every thing” ಎಂಬ ಮಂತ್ರವನ್ನು ಪಠಿಸಿ, ಆಗ ಮಾತ್ರ ಜೀವನದಲ್ಲಿ ಎಲ್ಲಾವನ್ನು ಪಡೆಯ ಬಹುದು ಎಂದು ಉತ್ತೇಜಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾ.ಸೇ.ಯೋ. ನೆಯ ಕಾರ್ಯಕ್ರಮಾಧಿಕಾರಿಗಳು, ಎಲ್ಲಾ ಬೋಧಕ , ಬೋದಕೆತರು ಮತ್ತು 108 ಸ್ವಯಂ ಸೇವಕರು ಭಾಗವಹಿಸಿದ್ದರು.

295063

Your IP: 3.145.186.6
2024-04-20 06:11

ಸಂಪರ್ಕ ವಿಳಾಸ

ಎಡಿಬಿ ಪ್ರಥಮ ದರ್ಜೆ ಕಾಲೇಜು

ಹರಪನಹಳ್ಳಿ
ವಿಜಯನಗರ ಜಿಲ್ಲೆ

583131

   
08398295005
   
08398295005
   
This email address is being protected from spambots. You need JavaScript enabled to view it.

 

Log in

Login to your account

Username *
Password *
Remember Me
Designed By Adya Technologies Adya-Technologies